Tuesday, January 27, 2026
Homeeducationಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ  ಸ್ಪರ್ಧೆ : ಬಹುಮಾನ ವಿತರಣೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ  ಸ್ಪರ್ಧೆ : ಬಹುಮಾನ ವಿತರಣೆ.


ಭಟ್ಕಳ: ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗಾಗಿ ‘ಭಟ್ಟಾಕಳಂಕನ ನಾಡು ಚನ್ನಾಭೈರಾದೇವಿಯ ಬೀಡು’   ಎಂಬ ವಿಷಯದ ಕುರಿತು ಕವನ ರಚನಾ ಸ್ಪರ್ಧೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಇಲ್ಲಿನ ಆನಂದಾಶ್ರಮ ಶಾಲೆಯ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆಯ ಗುರುವಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ, ಕ್ಷೇತ್ರ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ್, ಸರ್ಕಾರಿ ಪದವಿ ಕಾಲೇಜಿನ ಪ್ರಾoಶುಪಾಲ ನಾಗೇಶ್ ಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಎನ್. ನಾಯ್ಕ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಬಹುಮಾನ ವಿತರಿಸಿದರು.ಪ್ರಾಥಮಿಕ ಶಾಲಾ ವಿಭಾಗದಲ್ಲಿ
ಹೇಮಲತಾ ರಾವ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಟ್ಟಿ ಹಕ್ಕಲ್, ಸುಮಲತಾ ಡಿ. ನಾಯ್ಕ, ಸ. ಹಿ. ಪ್ರಾ. ಶಾಲೆ ಹೊನ್ನಮಡಿ, ಪ್ರಥಮ, ಎಚ್. ಏನ್. ನಾಯ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಾಪುರ,
ಪ್ರತಿಮಾ ನಾಯ್ಕ, ಆನಂದಾಶ್ರಮ ಪ್ರಾಥಮಿಕ ಶಾಲೆ
ದ್ವಿತೀಯ, ರಾಘವೇಂದ್ರ ಮಡಿವಾಳ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಮಡಿ,ಗಾಯತ್ರಿ ಅಂಬಿಗ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡಭಟ್ಕಳ, ಸುಧಾ ಭಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಟ್ಟಿ ಹಕ್ಕಲ್ ತೃತೀಯ ಹಾಗೂ ರಾಜಿವಿ ಮೊಗೇರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಟ್ಟಿಹಕ್ಕಲ್,
ಮಹೇಶ್ ನಾಯ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ,  ನಾಗರತ್ನ ಎಂ ನಾಯ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಕೂರ್, ಪ್ರಶಾಂತ್ ಕೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜೋಗಿಮನೆ, ಸತ್ಯವತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಮಡಿ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡರು.
ಪ್ರೌಢಶಾಲಾ ವಿಭಾಗದಲ್ಲಿ ಶಿವಕುಮಾರ ಹಿಚಕಡ್ ಸರ್ಕಾರಿ ಪ್ರೌಢಶಾಲೆ ಕುಂಟವಾಣಿ, ಎನ್. ಜಿ. ಗೌಡ, ಸರ್ಕಾರಿ ಪ್ರೌಢಶಾಲೆ ಬೆಳಕೆ ಪ್ರಥಮ, ಸುರೇಶ್ ತಾಂಡೇಲ್ ಸರ್ಕಾರಿ ಪ್ರೌಢಶಾಲೆ ಕುಂಟವಾಣಿ, ಸವಿತಾ ನಾಯ್ಕ ಸರ್ಕಾರಿ ಪ್ರೌಢಶಾಲೆ ಸೋನಾರಕೇರಿ ದ್ವಿತೀಯ,
ಗುಡ್ಡಪ್ಪ ಹರಿಜನ್ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರ್ನಮಕ್ಕಿ, ಭಾಗಿರಥಿ ಹೆಗಡೆ ಸರ್ಕಾರಿ ಪ್ರೌಢಶಾಲೆ ಗೊರಟೆ ತೃತೀಯ, ಆಶಾ ಬಲಿಮನೆ ಸರ್ಕಾರಿ ಪ್ರೌಢಶಾಲೆ ಗೊರಟೆ, ಕೀರ್ತಿ ಸುನಿಲ್ ನಾಯ್ಕ, ಶಮ್ಸ್ ಪ್ರೌಢಶಾಲೆ, ಪ್ರಶಾಂತ ನಾಯ್ಕ ಸರ್ಕಾರಿ ಪ್ರೌಢಶಾಲೆ ತೆಂಗಿನಗುಂಡಿ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು.
ಕಾಲೇಜು ವಿಭಾಗದಲ್ಲಿ ಗುರು ಸುಧೀಂದ್ರ ಕಾಲೇಜಿನ ರಶ್ಮಿ ಭಾಸ್ಕರ್ ನಾಯ್ಕ ಪ್ರಥಮ, ವಿಭಾ ನಾಯಕ ದ್ವಿತೀಯ, ಆಶಾ ಡಿಸೋಜ ಹಾಗೂ ಶ್ರೀವಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ರಮ್ಯಾ ನಾಯ್ಕ ತೃತೀಯ ಬಹುಮಾನ ಪಡೆದುಕೊಂಡರು.
ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಯಲ್ಲಿ
ಲೋಹಿತ್ ಲಕ್ಷ್ಮೀನಾರಾಯಣ ಹೆಗಡೆ ಕೆ ಪಿ ಎಸ್ ಸಿ.
ತೆರ್ನಮಕ್ಕಿ  ಪ್ರಥಮ, ಅನನ್ಯ ಕೆ. ನಾಯ್ಕ, ಆನಂದ ಶಾಲೆ ಪ್ರೌಢಶಾಲೆ ದ್ವಿತೀಯ, ದೀಕ್ಷಾ ರಾಮಚಂದ್ರ ನಾಯಕ್ ಸರ್ಕಾರಿ ಪ್ರೌಢಶಾಲೆ ಬೆಳಕೆ ತ್ರತೀಯ ಸ್ಥಾನ, ಮನಸ್ವಿನಿ ವಾಸುದೇವ ಶಾಸ್ತ್ರಿ, ಸರ್ಕಾರಿ ಪ್ರೌಢಶಾಲೆ ಸೊನಾರಕೇರಿ,
ಮೇಘನಾ ಎಸ್ ನಾಯಕ್ ಸಿದ್ದಾರ್ಥ ಪ್ರೌಢಶಾಲೆ ಶಿರಾಲಿ, ಭವಾನಿ ರಾಮ ಗೊಂಡ ಸರ್ಕಾರಿ ಪ್ರೌಢಶಾಲೆ ಕುಂಟವಾಣಿ, ಪ್ರತಿಕ್ಷ ಅಣ್ಣಪ್ಪ ಆಚಾರಿ ಬೀನಾ ವೈದ್ಯ ಪ್ರೌಢಶಾಲೆ ಮುರುಡೇಶ್ವರ, ಶಾರಿಕಾ ದೇವಿದಾಸ ನಾಯ್ಕ ಆನಂದಶ್ರಮ ಪ್ರೌಢಶಾಲೆ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ ಮುರ್ಡೇಶ್ವರ, ಪೂರ್ಣಿಮಾ ನಾಯ್ಕ, ಪರಮೇಶ್ವರ ನಾಯ್ಕ, ಶಿಕ್ಷಣ ಸಂಯೋಜಕ ಅಶೋಕ ಆಚಾರಿ,  ಅಕ್ಷರ ದಾಸೋಹದ ಸಮನ್ವಯಾಧಿಕಾರಿ ರಾಘವೇಂದ್ರ ನಾಯ್ಕ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಕವಿ ಶಿಕ್ಷಕರುಗಳಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರಲ್ಲದೆ ಸಾಹಿತ್ಯ ಸಮ್ಮೇಳನ ಮತ್ತಿತರ ಸಂದರ್ಭಗಳಲ್ಲಿ ಆಯೋಜಿಸುವ ಕವಿಗೋಷ್ಠಿಯಲ್ಲಿ ವೇದಿಕೆ ಕಲ್ಪಿಸಿ ಕವನ ವಾಚನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಭಾಸ್ಕರ ನಾಯ್ಕ
ಭಾಸ್ಕರ ನಾಯ್ಕ
ಅನುಭವಿ ಪತ್ರಕರ್ತರು, 21 ವರ್ಷಗಳ ಅನುಭವ, ಭಟ್ಕಳ ಡೈರಿ, ಕೆನರಾ ವಿಜಯ, ಸಪ್ತಮುಖಿ, ವಿಜಯವಾಣಿ,ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಹಾಗೂ ವಿಸ್ತಾರ ನ್ಯೂಸ್ ಕನ್ನಡ ವಾಹಿನಿಯಲ್ಲಿ ವರದಿಗಾರಿಕೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments