
ಭಟ್ಕಳ : ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ ಸಭಾಗ್ರಹದಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆ (20ಅಂಶಗಳ) ಪ್ರಗತಿ ಪರಿಶೀಲನಾ ಸಭೆಯು ನಡೆಯಿತು. ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲಿಸಿದ ಸಚಿವ ಮಂಕಾಳ ವೈದ್ಯ ಅವರು ಕಚೇರಿಗೆ ಬರುವ ಜನಸಾಮಾನ್ಯರನ್ನು ಎಲ್ಲಾ ಅಧಿಕಾರಿಗಳು ಗೌರವದಿಂದ ನಡೆಸಿಕೊಂಡು ಅವರ ಕೆಲಸ ಮಾಡಿಕೊಡಬೇಕು. ಪದೇ ಪದೇ ಅಧಿಕಾರಿಗಳು ಬುದ್ದಿ ಹೇಳಿಸಿಕೊಳ್ಳಲು ಕೆಲಸ ಮಾಡಿಕೊಳ್ಳಬಾರದು ಎಂದು ಖಡಕ್ ಸೂಚನೆ ನೀಡಿದರು.
ಜನರ ಹಣದಲ್ಲಿ ಸಂಬಳ ತೆಗೆದುಕೊಂಡು ಕೆಲಸ ಮಾಡುವವರು ನಾವೆಲ್ಲರು ಹಾಗಾಗಿ ಕಚೇರಿಗೆ ಬರುವ ಜನಸಾಮಾನ್ಯರನ್ನು ಎಲ್ಲಾ ಅಧಿಕಾರಿಗಳು ಗೌರವದಿಂದ ನಡೆಸಿಕೊಂಡು ಅವರ ಕೆಲಸ ಮಾಡಿಕೊಡಬೇಕು. ಕುಳಿತುಕೊಳ್ಳುವಂತೆ ಅವರ ಸಮಸ್ಯೆ ಆಲಿಸಿ ಬಗೆಹರಿಸುವ ಕೆಲಸದತ್ತ ಕಾರ್ಯ ಪ್ರವೃತ್ತರಾಗಬೇಕು ಪದೇ ಪದೇ ಅಧಿಕಾರಿಗಳು ಬುದ್ದಿ ಹೇಳಿಸಿಕೊಳ್ಳಲು ಕೆಲಸ ಮಾಡಿಕೊಳ್ಳಬಾರದು ಎಂದ ಅವರು ಅತಿಚಿಕ್ಕ ಸಮಯದಲ್ಲಿ ಆಗಬೇಕಾದ ಕೆಲಸಕ್ಕೆ ಜನರನ್ನು ಸತಾಯಿಸುವದನ್ನು ನಿಲ್ಲಿಸಬೇಕು. ಮೊದಲು ನಿಮ್ಮ ನಿಮ್ಮ ಕಛೇರಿಗಳಿಗೆ ಅವರು ಏಜೆಂಟರು ಬರುವುದನ್ನು ನಿಲ್ಲಿಸಬೇಕು. ಕಾರಣ ಇಂದಿನ ಎಜೆಂಟರೇ ಮುಂದೆ ಮಾಹಿತಿ ಹಕ್ಕಿನವರಾಗಲಿದ್ದಾರೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಸಭೆಗೆ ಹಾಜರಾದ ಅಧಿಕಾರಿಗೆ ನಿಮ್ಮ ಆಸ್ಪತ್ರೆಯಲ್ಲಿ ಇರುವ ರಾಜಕಾರಣ ಬಂದ್ ಆಗಬೇಕು. ಅದನ್ನು ತಕ್ಷಣಕ್ಕೆ ನಿಲ್ಲಿಸುವಂತೆ ನಿಮ್ಮ ಮೇಲಾಧಿಕಾರಿಗಳಿಗೆ ತಿಳಿಸಬೇಕು. ಇದು ನನ್ನ ಎಚ್ಚರಿಕೆಯಾಗಿದೆ. ರಾಜಕಾರಣ ಮಾಡುವವರಿದ್ದರೆ ನನ್ನ ಜೊತೆಗೆ ಮಾಡಿ ಎಂದು ಪ್ರತಿಕ್ರಿಯಿಸಿದರು.
ನಂತರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಸೇವೆ ಮತ್ತು ಔಷಧಿಯನ್ನು ತರಿಸಿ ಜನರಿಗೆ ರೋಗಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಬೇಂಗ್ರೆ ಪಶು ಇಲಾಖೆಯ ಜಾಗದಲ್ಲಿ ಕಂಪೌಂಡ್ ಮತ್ತು ರೂಮ್ ನಿರ್ಮಾಣ ಆಗಬೇಕು. 50 ಲಕ್ಷ ರೂ. ಅನುದಾನ ಸರಕಾರದಿಂದ ಭಟ್ಕಳದ ಕಚೇರಿ ನಿರ್ಮಾಣಕ್ಕೆ ಹಣ ಬಂದಿದೆ. ಪಶು ಅಂಬ್ಯುಲೆನ್ಸ ಸಹ ತಾಲೂಕಿನ ಕೆಲಸ ನಿರ್ವಹಿಸುತ್ತಿದೆ ಎಂದು ಪಶು ವೈದ್ಯರು ಸಚಿವರಲ್ಲಿ ಮನವಿ ಮಾಡಿದರು.
ತಾಲೂಕಿನಲ್ಲಿ ಎರಡು ಗೋಶಾಲೆಗಳಿದ್ದು, ಗೋಶಾಲೆಗೆ ಬೇಕಾದ ಪ್ರಸ್ತಾವನೆಯಂತೆ ನಮ್ಮ ಸರಕಾರದ ಹಣ ನೀಡಿದೆ. ವರ್ಷಕ್ಕೆ 11 ಲಕ್ಷ ಧೇನು ಆತಿಥ್ಯ ಗೋ ಶಾಲೆಗೆ, 2.5 ಲಕ್ಷ ಬೈಲೂರಿನ ಗೋಶಾಲೆಗೆ ಮತ್ತು ಚಿತ್ರಾಪುರದ ಮಠದ ಗೋಶಾಲೆಗು ನೀಡಿದ್ದೇವೆ.
ಇನ್ನು ದನ ಹೇಗೆ ಸತ್ತಿದ್ದರು 15 ಸಾವಿರ, ಕರು ಸತ್ತರು ಸಹ ಹಣ ನೀಡುತ್ತಿದ್ದೇವೆ ಕಾರಣ ಹೈನುಗಾರಿಕೆಯನ್ನೇ ನಂಬಿದ ರೈತರು ಅವರ ವ್ರತ್ತಿಯನ್ನು ಬಿಡಬಾರದು ಎಂದು ಅವರಿಗೆ ಸರಕಾರದ ಸಹಾಯ ಧನ ನೀಡುತ್ತಿದ್ದೇವೆ. ಈಗಾಗಲೇ 60 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದು ಸಚಿವ ವೈದ್ಯ ಅವರು ಹೇಳಿದರು.
ಒಂದು ತಿಂಗಳಿನಿಂದ ತಾಲೂಕಿನಲ್ಲಿ ಮಳೆ ಮಾಪನಗಳು ಸಮಸ್ಯೆಯಾದ ಪರಿಣಾಮ ರೈತರಿಗೆ ಇನ್ಸುರೆನ್ಸಗೆ ಸಮಸ್ಯೆಯಾಗಿದೆ. ಈ ಬಾರಿ 33 ರಷ್ಟು ಮಳೆ ಜಾಸ್ತಿ ಆಗಿರುವದರ ಬಗ್ಗೆ ವರದಿಯಿದೆಯೇ ಎಂದು ಸಚಿವರು ಪ್ರಶ್ನಿಸಿದರು. ಇನ್ನು 10 ದಿನದಲ್ಲಿ ಮಳೆ ಮಾಪನ ದುರಸ್ತಿಯಾಗಬೇಕು ಇಲ್ಲವಾದಲ್ಲಿ ನನ್ನ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.
ಈ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಫಲಿತಾಂಶಗಳು ಬಂದಿವೆ. ಒಟ್ಟು 2017 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು,
1720 ಪಾಸಾಗಿದ್ದಾರೆ. ಜಿಲ್ಲೆಯು ಶೇ. 88% ರಷ್ಟೂ ಅಂಕ ಗಳಿಸಿದ್ದಾರೆ. ಈ ಫಲಿತಾಂಶಕ್ಕೆ ಸಚಿವರು ಕಳೆದ ಕೆ.ಡಿ.ಪಿ.ಯಲ್ಲಿ ಎಸ್.ಎಸ್.ಎಲ್.ಸಿ. ಮಕ್ಕಳ ಫಲಿತಾಂಶ ಉತ್ತಮ ಆಗಬೇಕೆಂಬ ಸಲಹೆ ಸೂಚನೆ ನೀಡಿದಂತೆ ಇಲಾಖೆಯಿಂದಲೂ ಶಾಲಾ ಶಿಕ್ಷಕರು ಕೆಲಸ ನಿರ್ವಹಿಸಿದ್ದರ ಕಾರಣ ಮಕ್ಕಳ ಫಲಿತಾಂಶ ಉತ್ತಮ ಬರುವಂತೆ ಆಗಿದೆ. ಈ ಹಿನ್ನೆಲೆ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಚಿವರಿಂದಲೇ ಸನ್ಮಾನಿಸಬೇಕೆಂದು ಶಿಕ್ಷಣಾಧಿಕಾರಿ ವೇಂಕಟೇಶ ನಾಯಕ ಅವರು ಹೇಳಿದರು ಇದಕ್ಕೆ ಸಚಿವ ವೈದ್ಯ ಅವರು ಮಕ್ಕಳ ಜೊತೆಗೆ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಬೇಕು. ಆದಷ್ಟು ಅವರು ಅವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಮಾಡಿ ಎಂದು ಹೇಳಿದರು.
ಬಾಡಿಗೆ ಕಟ್ಟಡದಲ್ಲಿನ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು. ಬಾಡಿಗೆ ಕೊಟ್ಟು ಶಾಲೆ ನಡೆಸುತ್ತ ಇರುವುದು ಬಂದ ಆಗಬೇಕು. ಸ್ವಂತ ಕಟ್ಟಡದಲ್ಲಿ ಶಾಲೆ ನಡೆಸುವಂತಗಬೇಕು ಎಂದ ಅವರು ಒಂದು ಹೊಸ ಕಟ್ಟಡ ಅಥವಾ ಪಕ್ಕದ ಸರಕಾರಿ ಶಾಲೆಗೆ ಮಕ್ಕಳನ್ನು ಸ್ಥಳಾಂತರಿಸುವ ಕೆಲಸ ಮಾಡಬೇಕು.
ಗ್ರಹಜ್ಯೋತಿ, ಗಂಗಾ ಕಲ್ಯಾಣದಿಂದ ರೈತರಿಗೆ ಯಾವುದೇ ತೊಂದರೆಯಾಗಬಾರದು. ಗಂಗಾ ಕಲ್ಯಾಣ ಯೋಜನೆ ರೈತರಿಗೆ ಸಹಕಾರಿಯಾಗುವ ಕೆಲಸ ಅದು ಆಗಲೇಬೇಕಾಗಿದೆ ಎಂದ ಸಚಿವ ವೈದ್ಯ ಸೂಚಿಸಿದರು. ನಮ್ಮಲ್ಲಿ ವಿದ್ಯುತ ಇನ್ ಕಮ್ಮಿಂಗ್ ಸಂಪರ್ಕದಿಂದ ಸಮಸ್ಯೆ ಆಗಿದ್ದು ಇದರಿಂದ ವಿದ್ಯುತ್ ಕಡಿತವಾಗುತ್ತಿದೆ. ಮುಖ್ಯವಾಗಿ ಶಿರಸಿಯ ಮುಖ್ಯ ಕೇಂದ್ರದಿಂದ ಕುಮಟಾ, ಹೊನ್ನಾವರ ವಿದ್ಯುತ್ ಸಂಪರ್ಕದ ಸಮಸ್ಯೆ ಎದುರಿಸುತ್ತಿದ್ದೇವೆ. ಪಕ್ಕದ ಬೈಂದೂರಿನಲ್ಲಿಯೂ ಸಹ ವಿದ್ಯುತ್ ಘಟಕ ಆದ ಮೇಲೆ ಅಲ್ಲಿಂದ ವಿದ್ಯುತ್ ತರಿಸಿಕೊಳ್ಳಲು ಸಾಧ್ಯ ಎಂದು ಹೆಸ್ಕಾಂ ಅಭೀಯಂತರ ಮಂಜುನಾಥ ಅವರು ಸಚಿವರಲ್ಲಿ ವಿವರಿಸಿದ್ದು, ಸಚಿವರ ಅಧ್ಯಕ್ಷತೆಯಲ್ಲಿಯೇ ಕೆ.ಪಿ.ಟಿ.ಸಿ.ಎಲ್. ಅವರನ್ನು ಕರೆಯಿಸಿ ಸಭೆ ಮಾಡಲೇಬೇಕೆಂದು ಸಚಿವರಲ್ಲಿ ಅಧಿಕಾರಿಗಳು ಮನವಿ ಇಟ್ಟರು.
ಚಾಲಕರಿಗೆ, ನಿರ್ವಾಹಕರಿಗೆ ನೀವೇ ಬುದ್ದಿ ಹೇಳಬೇಕು ಇಲ್ಲವಾದರೆ ನೀವು ಈ ಹುದ್ದೆಯಲ್ಲಿ ಕುಳಿತುಕೊಳ್ಳಬಾರದು- ಸಚಿವ ವೈದ್ಯರಿಂದ ಡಿಪೋ ಮ್ಯಾನೇಜರಗೆ ತರಾಟೆ
ಈ ಹಿಂದೆ ಭಟ್ಕಳ ಬಸ್ ಘಟಕಕ್ಕೆ ಬಸ್ ಇಲ್ಲ ಎಂದಿದಕ್ಕೆ ಬಸ್ ನೀಡಿದ್ದೆ. ಚಾಲಕರಿಲ್ಲ, ಕಂಡಕ್ಟರ್ ಎಂದಿದಕ್ಕೆ ಅವರನ್ನು ಸಹ ನೇಮಿಸಿದ್ದೆ. ಆದರೆ ಬಸ್ ಘಟಕದಿಂದ
ಭಾನುವಾರ ಮತ್ತು ಶಾಲಾ ಕಾಲೇಜು ರಜೆ ದಿನ ಯಾಕೆ ಬಸ್ ಬೀಡುತ್ತಿಲ್ಲ. ಮತ್ತು ಹಳ್ಳಿಗಳಿಗೆ ಯಾಕೆ ಬಸ್ ಬಿಡುತ್ತಿಲ್ಲ ಎಂದು ಭಟ್ಕಳ ಕೆ.ಎಸ್.ಆರ್.ಟಿ.ಸಿ. ಘಟಕದ ಮ್ಯಾನೇಜರ ಅವರಲ್ಲಿ ಪ್ರಶ್ನಿಸಿದರು. ನಿಮ್ಮಂತಹ ಅಧಿಕಾರಿಗಳಿಂದ ನಾವು ಮತ್ತು ಸರಕಾರ ಜನರಿಗೆ ಏನು ಉತ್ತರ ನೀಡಬೇಕು ಎಂದು ತರಾಟೆಗೆ ತೆಗೆದುಕೊಂಡ ಸಚಿವ ವೈದ್ಯ ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ 20 ಜನ ಸ್ನೇಹಿ ಬಸ್ ನೀಡಿದ್ದೆ ಅದನ್ನು ಕುಮಟಾಗೆ ಮಾರಿಕೊಂಡಿದ್ದೀರಿ. ಹಳ್ಳಿಗಳಿಗೆ ಹೋಗುವ ಹೊಲ್ಟಿಂಗ್ ಬಸ ಯಾಕೆ ಬಿಡುತ್ತಿಲ್ಲ. ಅವೆಲ್ಲವು ಪುನಃ ಸಂಚರಿಸುವಂತೆ ಮಾಡಬೇಕೆಂದು ಸೂಚಿಸಿದರು.
ಹಾಗೂ ಇನ್ನು ಮುಂದೆ ಸಂಜೆ 8 ಗಂಟೆಯಿಂದ ಭಟ್ಕಳದಿಂದ ಒಂದು ಬಸ್ ಹೊನ್ನಾವರದಿಂದ ಒಂದು ಬಸ್ ಸಂಚರಿಸಬೇಕು. ಸಭೆಯಲ್ಲಿಯೇ ಜಿಲ್ಲಾ ಕೆ.ಎಸ್.ಆರ್.ಟಿ.ಸಿ. ಡಿ.ಸಿ. ಅವರಿಗೆ ದೂರವಾಣಿ ಕರೆ ಮೂಲಕ ಖಡಕ ಸೂಚನೆ ನೀಡಿದ್ದು ಬಸ್ ಬಿಡುವುದಾಗಿ ಸಭೆಯಲ್ಲಿ ಅಧಿಕಾರಿ ತಿಳಿಸಿದರು.
ನಿಮ್ಮಲ್ಲಿಯ ಚಾಲಕರಿಗೆ, ನಿರ್ವಾಹಕರಿಗೆ ನೀವೇ ಬುದ್ದಿ ಹೇಳಬೇಕು ಇಲ್ಲವಾದರೆ ನೀವು ಈ ಹುದ್ದೆಯಲ್ಲಿ ಕುಳಿತುಕೊಳ್ಳಬಾರದು. ಯೋಗ್ಯತೆ ಇಟ್ಟುಕೊಳ್ಳಬೇಕು. ಮತ್ತು ಜಾಲಿಯಲ್ಲಿನ ಐ.ಟಿ.ಐ ಮತ್ತು ಡಿಗ್ರಿ ಕಾಲೇಜಿಗೆ ಬಸ್ ಬಿಡುಗಡೆಗೆ ಸಚಿವರು ಸೂಚಿಸಿದರು. ಇದಕ್ಕೆ ಕಾಲೇಜಿನ ಆಡಳಿತ ಮಂಡಳಿ ಜೊತೆಗೆ ಕುಳಿತು ಮಾತುಕತೆ ಮಾಡಿ ಎಲ್ಲಾ ಮಕ್ಕಳು ಬಸ್ ನಲ್ಲಿಯೇ ಬರುವಂತೆ ಮಾಡಬೇಕು ಎಂದು
ಡಿಪೋ ಮ್ಯಾನೆಜರ್ ಗೆ ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆ ಬೆಳಕೆಯ ಜಾಗವು ಕಳೆದ 50 ವರ್ಷದಿಂದ ಇಲಾಖೆಯ ಹೆಸರಿಗೆ ಮಾಡಿಕೊಳ್ಳಲಿಲ್ಲವೆಂದರೆ ಏನು ಅರ್ಥ ಮುಂದಿನ ದಿನದಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಚಿಂತನೆ ಇದ್ದು, ಪಹಣಿ ಮಾಡಿಸಲು ಸಹಾಯಕ ಆಯುಕ್ತರಿಗೆ ಸೂಚಿಸಿದರು. ಈ ಹಿಂದೆ 1972-73 ರಲ್ಲಿ ಅರಣ್ಯ ಇಲಾಖೆ ಪತ್ರದ ಮೂಲಕ ವರ್ಗಾಯಿಸಲಾಗಿದೆ ಎಂದು ಇದು ಅದು ಅರಣ್ಯ ಇಲಾಖೆಯಲ್ಲಿ ಆ ದಾಖಲೆ ಸಿಗುತ್ತಿಲ್ಲ ವಾಗಿದೆ ಎಂದು ಸಭೆಯಲ್ಲಿದ್ದ ಅಧಿಕಾರಿ ಸಚಿವರಲ್ಲಿ ತಿಳಿಸಿದರು.
ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆಯಿಂದ ಸಸ್ಯಗಳನ್ನು ನೀಡಲಾಗುತ್ತಿದೆ. ಕಾಡು ಪ್ರಾಣಿಗಳಿಂದ ಸಾಕು ಪ್ರಾಣಿ ಹಾನಿ ಆದಲ್ಲಿ ಪರಿಹಾರ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದರು.
ಹಳೆ ಅತಿಕ್ರಮಣದಾರರಿಗೆ ತೊಂದರೆ ನೀಡಬೇಡಿ ಎಂದರು.
ಹಿಂದುಳಿದ ವರ್ಗ ಇಲಾಖೆಯಲ್ಲಿ ಹಾಸ್ಟೆಲಗೆ ಮಕ್ಕಳ ಸೇರ್ಪೆಡೆಗೆ ಶಾಸಕರ ಆಯ್ಕೆಯನ್ನು ನಿಲ್ಲಿಸಿದ್ದೇನೆ. ಇರುವ ನಿಯಮಕ್ಕಿಂತ 10 ವಿದ್ಯಾರ್ಥಿಗಳು ಹೆಚ್ಚು ಬಂದರು ಅವರನ್ನು ಹಾಸ್ಟೆಲಗೆ ಸೇರಿಸಿಕೊಳ್ಳಬೇಕು. ಮೊದಲ ಬಾರಿಗೆ ಮಹಿಳಾ ಹಾಸ್ಟೆಲ್ ಬಿಡುಗಡೆ ಮಾಡಿಸಿಕೊಂಡು ಬರಲಾಗಿದ್ದು, ಸಮರ್ಪಕವಾದ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ ಹಾಗು ಸರಿಯಾದಜಾಗವಿದ್ದರೆ ಅದನ್ನು ಪರಿಶೀಲಿಸಿ ನನ್ನ ಗಮನಕ್ಕೆ ತರಬೇಕು ಎಂದರು.
ಸರಕಾರದಿಂದ ಈಗ ಗ್ರಹಲಕ್ಷ್ಮೀ ಹಣವೂ
ಮೂರು ತಿಂಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಜನವರಿ ತನಕ ಹಣ ವಿತರಣೆ ಆಗಿದೆ ಎಂದು ಸಚಿವರು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಯಾವುದೇ ಪತ್ರವನ್ನು ಇಟ್ಟುಕೊಳ್ಳುವಂತಿಲ್ಲ. ಅದನ್ನು ಬೇಗ ಮುಗಿಸಬೇಕು ಎಂದು ಸಚಿವರು ತಿಳಿಸಿದರು. ಇನ್ನು ಸರಕಾರದ ಅನ್ನ ಭಾಗ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ತಿಂಗಳ ಸಭೆಯಲ್ಲಿಯೂ ಸಹ ಅಕ್ಕಿ ವಿತರಣೆ ಸಮರ್ಪಕವಾಗಿ ಆಗುವಂತೆ ಸೂಚನೆ ನೀಡುತ್ತಿದ್ದೇವೆ ಎಂದು ತಹಸೀಲ್ದಾರ ನಾಗೇಂದ್ರ ಕೊಳ ಶೆಟ್ಟಿ ಅವರು ಸಚಿವರ ಗಮನಕ್ಕೆ ತಂದರು.
ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಾರ್ಡನ್ನು ತಾಲೂಕಿನ ಎಲ್ಲ ೨-೩ ಸಾವಿರ ಆಟೋ ಚಾಲಕರಿದ್ದು ಎಲ್ಲರನ್ನು ನೋಂದಾಯಿಸಿಕೊಂಡು ಕಾರ್ಡ ನೀಡುವಂತೆ ಸೂಚಿಸಿದ ಸಚಿವ ವೈದ್ಯ ಅವರು ತಾಲೂಕಿನಲ್ಲಿ ಸದ್ಯ 300 ಆಟೋ ಚಾಲಕರು
ಕಾರ್ಡ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು.
ಪುರಸಭೆಯ ನಗರೋತ್ಥಾನ ಕಾಮಗಾರಿ ಕೆಲಸದ ಮರು ಟೆಂಡರ ಒಂದು ವಾರದೊಳಗೆ ಮಾಡಬೇಕು ಎಂದು ಪುರಸಭೆ ವಿಭಾಗದ ಜಿಲ್ಲಾ ಕಚೇರಿಗೆ ದೂರವಾಣಿ ಕರೆ ಮೂಲಕ ಸೂಚಿಸಿದರು.
ಅಬಕಾರಿ ಇಲಾಖೆಯಿಂದ ಡ್ರಗ್ಸ, ಗಾಂಜಾ, ಮಾದಕ ದ್ರವ್ಯ ತಡೆಗಟ್ಟಲು
ಪೋಲಿಸ್ ಇಲಾಖೆಯ ಜೊತೆಗೆ ಜಂಟಿ ಕಾರ್ಯಕ್ರಮ ಶಾಲಾ ಕಾಲೇಜಿನಲ್ಲಿ ಮಾಡುವಂತೆ ಸಚಿವರು ಸೂಚನೆ ನೀಡಿದರು.
ನಿಕೋಟಿನ್ ಪರೀಕ್ಷೆಗೆ ಕುಂದಾಪುರಕ್ಕೆ ತೆರಳಬೇಕಾದ ಅವಶ್ಯಕತೆ ಇದ್ದು ಭಟ್ಕಳದಲ್ಲಿ ಪರೀಕ್ಷಾ ಕೇಂದ್ರ ಮಾಡುವಂತೆ ಸಚಿವರಲ್ಲಿ ಅಬಕಾರಿ ಇಲಾಖೆಯ ಅಧಿಕಾರಿ ಮನವಿ ಮಾಡಿಕೊಂಡರು.
ತಾಲೂಕಿನಲ್ಲಿ ಸರ್ವೇ ನಂ., ಸರ್ವೇ ಕೆಲಸ ಸರಿಪಡಿಸಲು ಡ್ರೋನ್ ಸರ್ವೇ ಮಾಡಲು ಸೂಚಿಸಿದ್ದು ಎಲ್ಲಿಯ ತನಕ ಕೆಲಸ ಬಂದಿದೆ ಭಟ್ಕಳ ನಗರ ಭಾಗದಲ್ಲಿ ಎರಡು ವರ್ಷದಿಂದ ಸರ್ವೇ ಕಾರ್ಯ ನಡೆಯುತ್ತಿಲ್ಲ ಎಂದು ಸಚಿವರು ಪ್ರಶ್ನಿಸಿದ್ದು,ಸದ್ಯ ಡ್ರೋನ್ ಸರ್ವೇ ಕೆಲಸ ನಾಲ್ಕು ಪಂಚಾಯತ ಗೆ ಒಂದು ತಿಂಗಳು ಅವಕಾಶ ಕೋರಿದ ಅಧಿಕಾರಿ
ನಗರ ಮತ್ತು ಪಟ್ಟಣ ಪಂಚಾಯತ ಗೆ ಎರಡು ತಿಂಗಳೊಳಗಾಗಿ ಸರ್ವೇ ಕಾರ್ಯ ಮಾಡಲು ಅವಕಾಶ ಸಚಿವರಲ್ಲಿ ಕೇಳಿದರು.
ಬಂದರು ಇಲಾಖೆಯಿಂದ ಮುರುಡೇಶ್ವರದಲ್ಲಿ ಸದ್ಯ 400 ಕೋಟಿ ಬಂದರು ನಿರ್ಮಾಣದ ಟೆಂಡರ ಪ್ರಕ್ರಿಯೆ ನಡೆಯುತ್ತಿದೆ ಎಂದು ಇಲಾಖೆಯ ಅಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು.
2014 ರಲ್ಲಿ ಹದ್ಲುರು ಗ್ರಾಮದ ಕುಪ್ಪಯ್ಯ ಬಲೀಂದ್ರ ಗೊಂಡ ಅವರಿಗೆ ಸರಕಾರದಿಂದ
ಮನೆಯ ತೆರೆದ ಬಾವಿ ನಿರ್ಮಾಣ ಆಗಿಲ್ಲ ಆದರೆ ಬಿಲ್ ಪಾಸ ಮಾಡಲಾಗಿದೆ ಎಂದು
ಸಭೆಯಲ್ಲಿ ತಾಲೂಕು ಮಟ್ಟದ ಕೆ.ಡಿ.ಪಿ. ಸಭೆಯ ನಿರ್ದೇಶಿತ ಸದಸ್ಯ ಗಣೇಶ ಸೋಮಯ್ಯ ಗೊಂಡ ಸಚಿವ ವೈದ್ಯರಲ್ಲಿ ಆಗ್ರಹಿಸಿದರು.
ಇನ್ನುಳಿದಂತೆ ವಿವಿಧ ಇಲಾಖೆಯ ಪ್ರಗತಿಪರಿಶೀಲನೆಯನ್ನು ಸಭೆಯಲ್ಲಿದ್ದ ಆಯಾ ಅಧಿಕಾರಿಗಳಿಂದ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ 2023-24 ನೇ, ಸಾಲಿನ ಎಸ್ ಎಸ್ ಎಲ್ ಸಿ ಟಾಪ್ ೩ ಮಕ್ಕಳಿಗೆ ಸಚಿವರಿಂದ ಲ್ಯಾಪ್ಟಾಪ್ ವಿತರಿಸಲಾಯಿತು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಅಲ್ತಾಪ್ ಖರೂರಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ, ಪ್ರ. ಸಹಾಯಕ ಆಯುಕ್ತೆ ಕಾವ್ಯರಾಣಿ, ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಉಪಸ್ಥಿತರಿದ್ದರು.
ಇದೇ ಸಂದರ್ಭ ದಲ್ಲಿ ಚೌಥನಿಯ ಮೀನು ಮಾರುಕಟ್ಟೆ ಮಹಿಳೆಯರು ಸಚಿವರಲ್ಲಿ ಮನವಿ ನೀಡಿದರು. ಚೌಥನಿ ಮೀನು ಮಾರುಕಟ್ಟೆ ಜಾಗ ಇದೆ. ಅದನ್ನು ಪರಿಶೀಲಿಸಿ ಮಾಡಿಕೊಡಲಿದ್ದೇವೆ.
ಮುಖ್ಯ ಕಾರ್ಯನಿರ್ವಾಹಕ ವೆಂಕಟೇಶ ನಾಯಕ ಸ್ವಾಗತಿಸಿದರು. ಕರಿಯಪ್ಪ ನಾಯ್ಕ ವಂದಿಸಿದರು.
