
ಭಟ್ಕಳ: ಕಳೆದ ೧೫ ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ರಾಮಚಂದ್ರ ಸುಬ್ರಹ್ಮಣ್ಯ ನಾಯ್ಕ್ ಎನ್ನುವ ಆರೋಪಿಯೊರ್ವನನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮುರ್ಡೇಶ್ವರ ಪೊಲೀಸ್ ಠಾಣಾ ಯಲ್ಲಿ ೧೫ ವರ್ಷದ ಹಿಂದೆ ವರದಕ್ಷಣೆ ಕಿರುಕುಳ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡ ಈ ವ್ಯಕ್ತಿಯ ಪತ್ತೆಗಾಗಿ ಮುರ್ಡೇಶ್ವರ ಪೊಲೀಸರು ಹೈದ್ರಾಬಾದ್, ಬೆಂಗಳೂರು, ವಿಜಯಪುರ ಕಡೆಗಳಲ್ಲಿ ಮಾಹಿತಿ ಕಲೆ ಹಾಕಿದ್ದರು. ವಿಜಯಪುರದ ವಿವೇಕನಗರದಲ್ಲಿ ಮೆ ೧೦ಕ್ಕೆ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ವರಿಷ್ಠಾಧಿಕಾರಿ ಎಂ ನಾರಾಯಣ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೃಷ್ಣಮೂರ್ತಿ, ಜಿ.
ಮತ್ತು ಜಗದೀಶ ಎಂ. ಡಿ.ವೈ.ಎಸ್. ಪಿ ಮಹೇಶ ಎಮ್.
ಸಿ.ಪಿ.ಐ ಸಂತೋಷ ಕಾಯ್ಕಿಣಿ ಮಾರ್ಗ ದರ್ಶನದಲ್ಲಿ
ಪಿ.ಎಸೈ ಹಣಮಂತ ಬಿರಾದಾರ ಮತ್ತು ಸಿಬ್ಬಂದಿಗಳಾದ ಮಂಜುನಾಥ ಲಕ್ಕಾಪುರ ವಿಜಯ ನಾಯ್ ಮಂಜುನಾಥ ಮಡಿವಾಳರ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಜಿಲ್ಲಾ ವರಿಷ್ಠಾಧಿಕಾರಿ ಎಂ ನಾರಾಯಣ,ಪ್ರಸಂಶ ವ್ಯಕ್ತ ಪಡಿಸಿದ್ದಾರೆ.
