
ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ (ಎ.ಐ.ಎಂ.ಸಿ.ಎ), ಭಟ್ಕಳ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಹಯೋಗದೊಂದಿಗೆ, ಮೊದಲ ಬಾರಿಗೆ ಕ.ವಿ.ವಿ ಧಾರವಾಡ ಅಂತರ-ಕಾಲೇಜು 3 ನೇ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಭಟ್ಕಳದ ಅಂಜುಮನ್ ಬಾಲಕರ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಒಂಬತ್ತು ತಂಡಗಳು ಭಾಗವಹಿಸಿದ್ದವು. ಉಪಾಂತ್ಯ ಪಂದ್ಯದಲ್ಲಿ ಎ.ಐ.ಎಂ.ಸಿ.ಎ. ಕಾಲೇಜಿನ ತಂಡ ಭಟ್ಕಳ, ಶ್ರೀ ಗುರು ಸುಧೀಂದ್ರ ಭಟ್ಕಳದ ಕಾಲೇಜನ್ನು ಸೋಲಿಸಿದರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಸಿ ಇವರು ಅಂಜುಮನ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಭಟ್ಕಳವನ್ನು ಸೋಲಿಸಿತು. ರೋಮಾಂಚನಕಾರಿ ಅಂತಿಮ ಪಂದ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಸಿಯ ತಂಡ ಜಯಗಳಿಸಿತು. ಎ.ಐ.ಎಂ.ಸಿ.ಎ ಭಟ್ಕಳ ಕಾಲೇಜಿನ ತಂಡ ರನ್ನರ್ ಅಪ್ ಸ್ಥಾನವನ್ನು ಮತ್ತು ಶ್ರೀ ಗುರು ಸುಧೀಂದ್ರ ಕಾಲೇಜು ಭಟ್ಕಳ ತಂಡ ಮೂರನೇ ಸ್ಥಾನವನ್ನು ಪಡೆದುಕೊಂಡಿತು.
ಪಂದ್ಯಾವಳಿಯ ಉತ್ತಮ ಹಿಡಿತಗಾರ (ಕ್ಯಾಚರ್) ಆಗಿ ಚಂದ್ರಕಾಂತ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ), ದಾಳಿಕಾರನಾಗಿ (ರೈಡರ್) ಜಕ್ಕರ್ ಅಹ್ಮದ್ (ಎ.ಐ.ಎಂ.ಸಿ.ಎ ಭಟ್ಕಳ) ಮತ್ತು ಸವ್ಯಸಾಚಿ ಆಗಿ ಮಂಜುನಾಥ್ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಟ್ಕಳ ಪೊಲೀಸ್ ಠಾಣೆಯ ಪಿ.ಎಸ್.ಐ. ಶಾಂತಿನಾಥ್ ಪಸಾನೆ ಮತ್ತು ಕೆ.ಯು.ಪಿ.ಇ.ಡಿ.ಎ. ಧಾರವಾಡ ಅಧ್ಯಕ್ಷ ಆರ್.ಕೆ. ಮೇಸ್ತ ಹಾಗೂ
ಅಂಜುಮನ್ ಸಂಸ್ಥೆ ಭಟ್ಕಳ ಉಪಾಧ್ಯಕ್ಷ ಡಾ. ಮೊಹಮ್ಮದ್ ಜುಬೈರ್ ಕೋಲಾ (ನಿವೃತ್ತ ಮೇಜರ್) ಅಂಜುಮನ್ ಸಂಸ್ಥೆ ಭಟ್ಕಳ ವೃತ್ತಿಪರ ಕಾಲೇಜುಗಳ ಕಾರ್ಯದರ್ಶಿ ಅಹೀದ್ ಮೊಹ್ತಿಶಾಮ್, ಎ.ಐ.ಎಂ.ಸಿ.ಎ ಭಟ್ಕಳ ಪ್ರಾಂಶುಪಾಲ ಮೊಹಮ್ಮದ್ ಮೊಹ್ಸಿನ್ ಕೆ., ತಾಲೂತ್ ಮುಅಲ್ಲಿಮ್ ಎ.ಐ.ಎಂ.ಸಿ.ಎ ಭಟ್ಕಳದ ಉಪ ಪ್ರಾಂಶುಪಾಲ, ಮತ್ತು ಎ.ಐ.ಎಂ.ಸಿ.ಎ ಭಟ್ಕಳ ಸಂಘಟನಾ ಕಾರ್ಯದರ್ಶಿ ಮೋಹನ ಮೇಸ್ತ ಉಪಸ್ಥಿತರಿದ್ದರು.
ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ಪಂದ್ಯಾವಳಿ ರಾತ್ರಿಯ ತನಕ ನಡೆಯಿತು. ಸಂಘಟಕರು, ಭಾಗವಹಿಸುವವರು ಮತ್ತು ಪ್ರೇಕ್ಷಕರ ಪೂರ್ಣ ಸಹಯೋಗದೊಂದಿಗೆ, ಸಂಜೆ 7.30 ಕ್ಕೆ ಪ್ರಾರಂಭವಾಗಿ, ರಾತ್ರಿ 11.30 ಕ್ಕೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
