ಭಟ್ಕಳ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ 4ನೇ ದಿನವೂ ಮುಂದುವರೆದಿದ್ದು ಶನಿವಾರವೂ ಸಹ ಭಾರೀ ಮಳೆ ಸುರಿದಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಕೆಲವೊಂದು ಮುಂಜಾಗ್ರತಾ ಕ್ರಮವನ್ನು ಸಹ ಜಿಲ್ಲಾಡಳಿತದಿಂದ ನೀಡಲಾಗಿದ್ದು ಇವುಗಳಾವುವೂ ಸಹ ಮುರುಡೇಶ್ವರಕ್ಕೆ ಅನ್ವಯ ವಾಗದಂತೆ ಭಾಸವಾಗಿದೆ.
ಸತತ ಮಳೆಯ ಹಿನ್ನೆಲೆ ಜಿಲ್ಲೆ ಸೇರಿದಂತೆ ಭಟ್ಕಳ ತಾಲೂಕಿನಲ್ಲಿ ಮಳೆಯ ಅವಾಂತರ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಕರ್ನಾಟಕದ ಕರಾವಳಿ ಭಾಗಗಳಿಗೆ ಹೈ ಅಲರ್ಟನ್ನು ಜಿಲ್ಲಾಢಳಿತ ಘೋಷಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಸಮುದ್ರ ತೀರದಲ್ಲಿ ಮುಂದಿನ ಕೆಲ ದಿನಗಳ ಕಾಲ ಬಿರುಗಾಳಿ ಸಹಿತ ಮಳೆ ಬೀಸುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಎಚ್ಚರಿಸಿತ್ತು. ಸಮುದ್ರದಲ್ಲಿ 3 ರಿಂದ 4 ಮೀಟರ್‌ನಷ್ಟು ಎತ್ತರದ ಅಲೆಗಳು ಏಳಲಿವೆ. ಇದರಿಂದ ಪ್ರವಾಸಿಗರು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿತ್ತು.
ಆದರೆ ಜಿಲ್ಲಾಢಳಿತದ ಈಮುನ್ನೆಚ್ಚರಿಕೆಯು ಮುರುಡೇಶ್ವರಕ್ಕೆ ಅನ್ವಯಿಸದಂತಿದ್ದು ಇಲ್ಲಿಗೆ ಬರುವಂತಹ ಪ್ರವಾಸಿಗರು ಇದ್ಯಾವುದನ್ನೂ ಲೆಕ್ಕಿಸದೇ ಸಮುದ್ರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಸಮುದ್ರದ ನಿತ್ಯದ ಸ್ವಭಾವದ ಬಗ್ಗೆ ತಿಳುವಳಿಕೆ ಇಲ್ಲದೇ ಅಪಾಯ ತಂದುಕೊಳ್ಳುತ್ತಿರುವುದು ಕೂಡ ಜಿಲ್ಲಾಡಳಿತಕ್ಕೆ ದೊಡ್ಡ ಸಮಸ್ಯೆಯಾಗಿದೆ.
ಮಳೆಗಾಲದಲ್ಲಿ ಸಮುದ್ರದ ಅಲೆಗಳು ರೌದ್ರವಾಗಿರುತ್ತವೆ. ನೀರಿಗೆ ಇಳಿದ ತಕ್ಷಣವೇ ಆಳಕ್ಕೆ ಎಳೆದೊಯುತ್ತದೆ. ಬೇಸಿಗೆಯಲ್ಲಿರುವಷ್ಟು ಶಾಂತತೆ ಮಳೆಗಾಲದಲ್ಲಿ ಕಡಲತೀರದಲ್ಲಿ ಇರುವುದಿಲ್ಲ. ಸ್ಥಳೀಯರು ಇದನ್ನು ತಿಳಿಹೇಳಿದರೂ ಕೆಲ ಪ್ರವಾಸಿಗರು ಕೇಳುವುದಿಲ್ಲ ಎಂದು ಸ್ಥಳೀಯರ ಚಿಂತೆಯಾಗಿದೆ.
ಪ್ರವಾಸಿಗರ ನಿಯಂತ್ರಣ ಲೈಫ್ ಗಾರ್ಡಗಳಿಗೆ ತಲೆನೋವು
ಪದೇ ಪದೇ ಸಮುದ್ರಕ್ಕೆ ಈಜಲು ತೆರಳಬೇಡಿ ಎಂದರೂ ಸಹ ನಮ್ಮ ಮಾತನ್ನು ಕೇಳದೇ ಪ್ರವಾಸಿಗರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಮಾಡಿಕೊಳ್ಳುತ್ತಾರೆ. ನಾವು ಈ ಚಂಡಮಾರುತದ ವೇಳೆಯಲ್ಲಿ ಸಮುದ್ರಕ್ಕೆ ಪ್ರವಾಸಿಗರು ಇಳಿಯದಂತೆ ನೋಡಿಕೊಳ್ಳುತ್ತೇವೆ. ಆದರೆ ಬಹುತೇಕರು ಜೀವದ ಭಯವಿಲ್ಲದೇ ನಮ್ಮ ಮಾತಿಗೂ ಬೆಲೆಕೊಡದೇ ಈಜಲು ತೆರಳುತ್ತಾರೆ. ಆಗ ಏನಾದರೂ ಅವಘಡ ಸಂಭವಿಸಿದರೆ ನಮ್ಮ ಜೀವದ ಹಂಗು ತೊರೆದು ಕಾಪಾಡುತ್ತೇವೆ. ಜಿಲ್ಲಾಡಳಿತ ಸೂಚನೆಗೂ ಪ್ರವಾಸಿಗರು ಬೆಲೆ ಕೊಡುವುದಿಲ್ಲ. ಪೋಲೀಸರು ಎಷ್ಟೇ ಬೆದರಿಸಿದರೂ ಸಹ ಹೆದರದೇ ಸಮುದ್ರಕ್ಕೆ ಈ ಸಂದರ್ಭದಲ್ಲಿ ಈಜಲು ಮೋಜು ಮಸ್ತಿಗೆ ಇಳಿದರೆ ಏನು ಮಾಡಬೇಕು ಎನ್ನುವುದು ತಲೆನೋವಾಗಿದೆ ಎಂದು ಲೈಫ್ ಗಾರ್ಡ್ ತಮ್ಮ ಅಸಹಾಯಕತೆಯನ್ನು ತೊಡಿಕೊಂಡಿದ್ದಾರೆ.
ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಮೋಜು ಮಸ್ತಿಗಿಳಿದು ಕೊನೆಯಲ್ಲಿ ಎಲ್ಲಿಂದಲೋ ಬಂದು ಮುರುಡೇಶ್ವರದಲ್ಲಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕ್ಯಾರೇ ಎನ್ನದ ತಾಲೂಕಾಡಳಿತ, ಪೋಲಿಸ್ ಇಲಾಖೆ: ಮುಖ್ಯವಾಗಿ ಪ್ರವಾಸಿಗರು ಮೋಜು ಮಸ್ತಿಗೆ
ಜಿಲ್ಲಾಢಳಿತ ಆದೇಶ:
ಶನಿವಾರದಿಂದ ಮಂಗಳ ವಾರದವರೆಗೆ ಜಿಲ್ಲೆಯ ಕರಾವಳಿಯಲ್ಲಿ ರೆಡ್ ಅಲರ್ಟ್ ಮುನ್ಸೂಚನೆ ಇದೆ. ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಈ ಮಾಹಿತಿಯನ್ನು ನೀಡಿದ್ದಾ-ರೆ. ಭಟ್ಕಳದಿಂದ ಕಾರವಾರದ ಮಾಜಾಳಿವರೆಗೆ ಸಮುದ್ರದ ಅಲೆಗಳು 2.7 ಮೀಟರ್‌ನಿಂದ 3.3 మింటరోగి విళ్ళవా ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ದೋಣಿಗಳನ್ನು ಸಮುದ್ರಕ್ಕೆ ಇಳಿಸಬಾರದು ಮತ್ತು ಸಾರ್ವಜನಿಕರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಸಲಾಗಿದೆ.

