
ಭಟ್ಕಳ (Bhatkal): ಭಟ್ಕಳದಲ್ಲಿ ದರೋಡೆಗೆ ಹೊಂಚುಹಾಕುತ್ತಿದ್ದ ಗರುಡಾ ಗ್ಯಾಂಗ್ ನ (Garuda Gang) ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಮಂಗಳೂರಿನ (Mangaluru) ಚೊಕ್ಕಬೆಟ್ಟು ನಿವಾಸಿ ಜಲೀಲ್ ಹುಸೈನ್ (೩೯), ಭಟ್ಕಳದ ಹೆಬಳೆಯ ಗಾಂಧಿನಗರದ ನಾಸಿರ್ ಹಕೀಮ್ ಮೊಹಿದ್ದೀನ್ ಅಬುಲ್ ಖಾದರ್ (೨೬) ಮತ್ತು ಓರ್ವ ಬಾಲಕನನ್ನು ಬಂಧಿಸಲಾಗಿದೆ. ಭಟ್ಕಳದ ಮುಗ್ಧಂ ಕಾಲೋನಿಯ ಜಿಶಾನ್, ಭಟ್ಕಳದ ಬಟ್ಟಾಗಾಂವ್ ನಿವಾಸಿ ನಬೀಲ್ ಪರಾರಿಯಾಗಿದ್ದಾರೆ. ಇವರಿಬ್ಬರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಬಂಧಿತರಲ್ಲಿ ಜಲೀಲ್ ಹುಸೈನ್ ವೃತ್ತಿಯಲ್ಲಿ ಚಾಲಕನಾಗಿದ್ದು, ಗರುಡಾ ಗ್ಯಾಂಗಿನ ಸದಸ್ಯನಾಗಿದ್ದಾನೆ. ಈತನ ಮೇಲೆ ಈಗಾಗಲೇ ೧೧ ಪ್ರಕರಣಗಳು ದಾಖಲಾಗಿದ್ದು, ಅಂತರ್ ಜಿಲ್ಲಾ ನಟೋರಿಯಸ್ ಕಳ್ಳನಾಗಿದ್ದಾನೆ. ಈತ ಕಳ್ಳತನ ಮತ್ತು ದರೋಡೆ ಮಾಡುವ ಪ್ರವೃತ್ತಿ ಉಳ್ಳವನಾಗಿದ್ದಾನೆ. ನಾಸಿರ್ ಹಕೀಮ್ ವಿರುದ್ಧ ಈಗಾಗಲೇ ೨ ಪ್ರಕರಣಗಳು ದಾಖಲಾಗಿವೆ. ಈತನು ಅಂತರ್ ಜಿಲ್ಲಾ ನಟೋರಿಯಸ್ ಕಳ್ಳನಾಗಿದ್ದು, ಈತನು ಕೂಡ ಕಳ್ಳತನ ಮತ್ತು ದರೋಡೆ ಮಾಡುವ ಪ್ರವೃತ್ತಿ ಉಳ್ಳವನಾಗಿದ್ದಾನೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಮೇಲೆ ಈಗಾಗಲೇ ೧ ಪ್ರಕರಣ ದಾಖಲಾಗಿದೆ.
