Tuesday, January 27, 2026
Homeಟೈಮ್ಸ್ ಆಫ್ ಕೆನರಾ ವರದಿಕೋಸ್ಟ್ ಗಾರ್ಡ್ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರೊಂದಿಗೆ ಸಚಿವ ಮಂಕಾಳ ವೈದ್ಯ ಸಭೆ

ಕೋಸ್ಟ್ ಗಾರ್ಡ್ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರೊಂದಿಗೆ ಸಚಿವ ಮಂಕಾಳ ವೈದ್ಯ ಸಭೆ

ಮಂಗಳೂರು: ಮೀನುಗಾರರು ಹಾಗೂ ಕೋಸ್ಟಗಾರ್ಡ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಕೆಲಸಮಾಡಬೇಕು. ನಾವೆಲ್ಲ ಒಂದೆ ದೇಶದ ಪ್ರಜೆಗಳು ತಾರತಮ್ಯ ಮಾಡದೆ ದೇಶದ ಸುರಕ್ಷತೆಯ ವಿಷಯದಲ್ಲಿ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಇಂದು ಮಂಗಳೂರಿನ ಕೋಸ್ಟ್ಗಾರ್ಡ್ ಕಚೇರಿಯಲ್ಲಿ, ಮೀನುಗಾರರ ಸಮುದ್ರ ಸುರಕ್ಷತೆ ಕುರಿತು ಕೋಸ್ಟ್ಗಾರ್ಡ್ನ ಅಧಿಕಾರಿಗಳು, ಹಾಗೂ ವಿವಿಧ ಮೀನುಗಾರರ ಸಂಘಟನೆಗಳು/ಒಕ್ಕೂಟಗಳ ಪ್ರಮುಖ ನಾಯಕರು ಸೇರಿದಂತೆ ಇತರ ಪಾಲುದಾರೊಂದಿಗೆ ಮಹತ್ವದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಾವಳಿ ಪ್ರದೇಶದಲ್ಲಿ ಮೀನುಗಾರಿಗೆ ಸುರಕ್ಷತೆ ಕಲ್ಪಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಕಡಲ ಮಕ್ಕಳೊಂದಿಗೆ ಸಮಾಧಾನದಿಂದ ಮಾತನಾಡಬೇಕು. ಎಲ್ಲಡೆಯೂ ಅಧಿಕಾರದ ದರ್ಪದಿಂದ ವರ್ತಿಸದಂತೆ ಕಿವಿಮಾತು ಹೇಳಿದರು. ಮೀನುಗಾರರು ಅಪಾಯದ ಪರಿಸ್ಥಿತಿಯಲ್ಲಿ ಇದ್ದಾಗ ಕೈಗೊಳ್ಳಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು. ಮಳೆಗಾಲದಲ್ಲಿ ಚಂಡಮಾರುತದAತ ಸಂದರ್ಬದಲ್ಲಿ ಇಲಾಖೆಯ ನಿಯಮಗಳನ್ನು ಪಾಲಿಸಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಮೀನುಗಾರರಿಗೆ ಹೇಳಿದರು. ಸಮುದ್ರದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು, ಅಪಾಯಗಳನ್ನು ತಗ್ಗಿಸಲು ಮತ್ತು ಮೀನುಗಾರ ಸಮುದಾಯದ ಜೀವನೋಪಾಯವನ್ನು ರಕ್ಷಿಸಲು ಎಲ್ಲರೂ ತಮ್ಮ ಬದ್ಧತೆಯನ್ನು ತೋರಿಸಬೇಕು ಎಂದರು.
ಕಡಲಿನಲ್ಲಿ ಮೀನುಗಾರರ ಸುರಕ್ಷತಾ ಕ್ರಮಗಳು ಮತ್ತು ನಿಯಮಾವಳಿಗಳನ್ನು ಬಲಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕೋಸ್ಟ್ಗಾರ್ಡ್ ಡಿಐಜಿ ಪಿ.ಕೆ.ಮಿಶ್ರಾ, ಮೀನುಗಾರಿಕೆ ನಿರ್ದೇಶಕ ದಿನೇಶ ಕುಮಾರ ಕಳ್ಳೇರ, ಮೀನುಗಾರಿಕೆ ಇಲಾಖೆಯ ಮತ್ತು ಕೋಸ್ಟ್ಗಾರ್ಡ್ನ ಅಧಿಕಾರಿಗಳು, ಹಾಗೂ ವಿವಿಧ ಮೀನುಗಾರರ ಸಂಘಟನೆಗಳು/ಒಕ್ಕೂಟಗಳ ಪ್ರಮುಖ ನಾಯಕರು ಸೇರಿದಂತೆ ಇತರ ಪಾಲುದಾರರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಭಾಸ್ಕರ ನಾಯ್ಕ
ಭಾಸ್ಕರ ನಾಯ್ಕ
ಅನುಭವಿ ಪತ್ರಕರ್ತರು, 21 ವರ್ಷಗಳ ಅನುಭವ, ಭಟ್ಕಳ ಡೈರಿ, ಕೆನರಾ ವಿಜಯ, ಸಪ್ತಮುಖಿ, ವಿಜಯವಾಣಿ,ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಹಾಗೂ ವಿಸ್ತಾರ ನ್ಯೂಸ್ ಕನ್ನಡ ವಾಹಿನಿಯಲ್ಲಿ ವರದಿಗಾರಿಕೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments