ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯರ ಅಭಿಮಾನಿ ಬಳಗ ಮತ್ತು ಪ್ರತಿಷ್ಠಿತ ಬೀನಾ ವೈದ್ಯ ಶಿಕ್ಷಣ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಾಳೆ ದಿ. 14.6.2025 ರಂದು ಬೆಳಿಗ್ಗೆ 9.30 ರಿಂದ ಪೂರ್ವಾಹ್ನ 2.00 ಗಂಟೆಯವರೆಗೆ
ಮುರ್ಡೇಶ್ವರದ ಬೀನಾವೈದ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬೃಹತ್ ಪ್ರಮಾಣದಲ್ಲಿ “ರಕ್ತದಾನ ಶಿಬಿರ” ನಡೆಯಲಿದೆ. ಈ ರಕ್ತದಾನ ಶಿಬಿರವನ್ನು ರಾಜ್ಯ ಮೀನುಗಾರಿಕಾ ಸಚಿವರು ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಂಕಾಳ್ ವೈದ್ಯರವರು ಶಿಬಿರವನ್ನ ಉದ್ಘಾಟಿಸಲಿದ್ದಾರೆ.
