Tuesday, January 27, 2026
Homeಟೈಮ್ಸ್ ಆಫ್ ಕೆನರಾ ವರದಿಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ.

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ.



ಭಟ್ಕಳ (Bhatkal):ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ ಭಟ್ಕಳ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿಗೆ ಭಟ್ಕಳ ಶಹರ ಠಾಣೆಯ ಪಿಸ್.ಎಸ್.ಐ  ರಾಠೋಡ್ ರವರು ಠಾಣಾ ಪೊಲೀಸ್ ಸಿಬ್ಬಂದಿ  ದೀಪಕ ನಾಯ್ಕ ರವರೊಡಗೂಡಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ,  ಪೋಕ್ಸೋ ಕಾಯ್ದೆ, ಮಾದಕ ವಸ್ತು ವ್ಯಸನದಿಂದ ಆಗುವ ದುಷ್ಪರಿಣಾಮಗಳು, ಸಂಚಾರಿ ನಿಯಮಗಳು, ಮಕ್ಕಳ ಸಹಾಯವಾಣಿ 1098, ಶರಾವತಿ ಪಡೆ ಮತ್ತು ನಿರ್ಭಯ ಪಡೆ. ಜನಸ್ನೇಹಿ ಪೊಲೀಸ್ ಠಾಣೆ.112, ಸೈಬರ್ ಕ್ರೈಂ ಬಗ್ಗೆ ತಿಳಿಸಿ, ಜಾಗೃತಿ ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ ಪೈ ರವರು ಮಾತನಾಡಿ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಯವರ ಕಾರ್ಯವನ್ನು ಕೊಂಡಾಡುತ್ತಾ, ಸಂಚಾರಿ ನಿಯಮಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲಿಸಿ ಇಲಾಖೆಗೆ ಸರ್ವ ರೀತಿಯಿಂದ ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಬಿ.ಕಾಂ ವಿಭಾಗದ ಉಪ ಪ್ರಾಂಶುಪಾಲರಾದ  ಪಿಸ್.ಎಸ್.ಹೆಬ್ಬಾರ್, ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಭಟ್ಕಳ ತಾಲೂಕಿನ ವಿಶೇಷ ಪ್ರಕರಣಗಳನ್ನು ಭೇದಿಸುವಲ್ಲಿ ವಿಶೇಷ ಕಾರ್ಯವನ್ನು ಮಾಡಿದ ಪೋಲಿಸ್ ತಂಡಕ್ಕೆ ಕರತಾಡನದ ಮೂಲಕ ಧನ್ಯವಾದ ಸಮರ್ಪಿಸಿ, ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿದರು.

ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ.

https://sgsc-samruddhi.blogspot.com/2025/06/blog-post_21.html

ಭಾಸ್ಕರ ನಾಯ್ಕ
ಭಾಸ್ಕರ ನಾಯ್ಕ
ಅನುಭವಿ ಪತ್ರಕರ್ತರು, 21 ವರ್ಷಗಳ ಅನುಭವ, ಭಟ್ಕಳ ಡೈರಿ, ಕೆನರಾ ವಿಜಯ, ಸಪ್ತಮುಖಿ, ವಿಜಯವಾಣಿ,ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಹಾಗೂ ವಿಸ್ತಾರ ನ್ಯೂಸ್ ಕನ್ನಡ ವಾಹಿನಿಯಲ್ಲಿ ವರದಿಗಾರಿಕೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments