Tuesday, January 27, 2026
Homeಟೈಮ್ಸ್ ಆಫ್ ಕೆನರಾ ವರದಿಕ್ರಿಯೇಟಿವ್ ಬಾಯ್ಸ್ ತಂಡದ ಶ್ರಮದಾನ: ಮೂಡಭಟ್ಕಳ ಗೋಪಿನಾಥ್ ಹೊಳೆಯಿಂದ  ಬೃಹತ್ ಮರ ತೆರವು

ಕ್ರಿಯೇಟಿವ್ ಬಾಯ್ಸ್ ತಂಡದ ಶ್ರಮದಾನ: ಮೂಡಭಟ್ಕಳ ಗೋಪಿನಾಥ್ ಹೊಳೆಯಿಂದ  ಬೃಹತ್ ಮರ ತೆರವು

ಭಟ್ಕಳ: ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಬಾರಿ ಮಳೆಗೆ ಮೂಡಭಟ್ಕಳ ಗೋಫಿನಾಥ ನದಿಗೆ ಅಡ್ಡಲಾಗಿ ಬಿದ್ದಂತಹ ಬೃಹಧಾಕಾರದ ಆಲದ‌ ಮರವೊಂದನ್ನು ಭಾನುವಾರ ಸ್ಥಳೀಯ ಕ್ರೀಯೆಟಿವ್ ಬಾಯ್ಸ ಹುಡುಗರ ತಂಡ ಶ್ರಮ ವಹಿಸಿ ಕಟಾವು ಮಾಡಿ ತೆರವು ಮಾಡಿದ್ದಾರೆ.
ಮೂಡಭಟ್ಕಳ ಗೋಫಿನಾಥ  ನದಿಯ ಕಟ್ಟೆಗೆ ತಾಗಿಕ್ಕೊಂಡ ಬೃಹತ್ ಆಲದ ಮರ ಇದಾಗಿತ್ತು. ಪ್ರತಿ ವರ್ಷ ಇದೇ ಕಟ್ಟೆಯ ಮೇಲೆ ಚನ್ನಪಟ್ಟಣ ಹನುಮಂತ ದೇವರ ಉತ್ಸವ ಮೂರ್ತಿ ಪಾಲಕಿಯಲ್ಲಿ ಬಂದು ಇದೇ ಕಟ್ಟೆಯ ಮೇಲೆ ಕೂತು ಭಕ್ತರ ಸೇವೆ ಪಡೆಯುತಿತ್ತು. ಕಳೆದ ವಾರದ ಸುರಿದ ಬಾರಿ ಮಳೆ ಗಾಳೆಗೆ ಮರ ಬುಡಸಮೇತ ಕಳಚಿ ಬಿದ್ದಿತು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮರ ತೆರವಿಗೆ ಮುಂದಾಗಿರಲಿಲ್ಲ. ನದಿಗೆ ಅಡ್ಡಲಾಗಿ ಮರ ಬಿದ್ದಿರುವ ಕಾರಣ ಬಾರಿ ಮಳೆಯಾದರೆ ನದಿ ನೀರು ಮುಂದೆ ಸಾಗಲಾರದೇ ಸುತ್ತಮುತ್ತಲಿನ ಪ್ರದೇಶಗಳಿಗೆ ಮನೆ ನೀರು ನುಗ್ಗುವ ಸನ್ನಿವೇಶ ಇತ್ತು. ಇದನ್ನು ಮನಗಂಡ ತಾಲ್ಲೂಕಿನ ಕ್ರೀಯೆಟಿವ್ ಬಾಯ್ಸ ಸದಸ್ಯರು ಶ್ರಮದಾನ ಮೂಲಕ ಬೃಹಧಾಕಾರದ ಮರ ಕಟಾವು ಮಾಡಿದ್ದಾರೆ. ಭಟ್ಕಳದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿರುವ 50 ಸದಸ್ಯರನ್ನೊಳಗೊಂಡ ಭಟ್ಕಳ ಕ್ರಿಯೇಟಿವ್ ಬಾಯ್ಸ ತಂಡ ಮರ ಕಟಾವು ಮಾಡುವ ಯಂತ್ರವನ್ನು ತಮ್ಮ ವಂತಿಗೆಯ ಹಣದಿಂದ ಬಾಡಿಗೆಗೆ  ತಂದು ಯಂತ್ರದ ಸಹಾಯದಿಂದ ಬೃಹಧಾಕಾರದ ಮರ‌ ಕಟಾವು ಮಾಡಿ ಅದರ ತುಂಡುಗಳನ್ನು ವ್ಯವಸ್ಥಿತವಾಗಿ  ನಿಗದಿತ ಸ್ಥಳದಲ್ಲಿ ಕೂಡಿಟ್ಟು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಕಳೆದೊಂದು ವಾರದ ಹಿಂದೆ ಮುರಿದು ಬಿದ್ದ ಮರವನ್ನು ಸ್ಥಳೀಯಾಡಳಿತ ತೆರವು ಮಾಡಬೇಕಿತ್ತು. ಆದರೆ ಸ್ಥಳಿಯಾಡಳಿತ‌ ಮರ ಕಟಾವಿಗೆ ತಗಲುವ ಬಾರಿ ವೆಚ್ಷ ಭರಿಸುವರ್ಯಾರು ಎನ್ನುವ ಬಿಜ್ಣಾಸೆಯಲ್ಲಿತ್ತು. ಇದನ್ನು ಮನಗಂಡ ನಮ್ಮ ತಂಡದ ಸದಸ್ಯರು  ಸ್ವಯಂ ಕಾರ್ಯಾಚರಣೆ ನಡೆಸಿ ಮರ ತೆರವು ಮಾಡದ್ದೇವೆ ಎಂದು
ಕ್ರೀಯೆಟಿವ್ ಬಾಯ್ಸ ಸದಸ್ಯ ಕುಮಾರ ನಾಯ್ಕ ಹೇಳಿದರು

ಭಾಸ್ಕರ ನಾಯ್ಕ
ಭಾಸ್ಕರ ನಾಯ್ಕ
ಅನುಭವಿ ಪತ್ರಕರ್ತರು, 21 ವರ್ಷಗಳ ಅನುಭವ, ಭಟ್ಕಳ ಡೈರಿ, ಕೆನರಾ ವಿಜಯ, ಸಪ್ತಮುಖಿ, ವಿಜಯವಾಣಿ,ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಹಾಗೂ ವಿಸ್ತಾರ ನ್ಯೂಸ್ ಕನ್ನಡ ವಾಹಿನಿಯಲ್ಲಿ ವರದಿಗಾರಿಕೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments