ಜುಲೈ ತಿಂಗಳ 5ರಂದು ಆನಂದ ಆಶ್ರಮ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ವನಮಹೋತ್ಸವ ಮತ್ತು ವಿವಿಧ ಕ್ಲಬ್ ಗಳು ಉದ್ಘಾಟನೆ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಸಿ. ವಿನುತಾ ಡಿಸೋಜಾ, ಉಪ ಪ್ರಾಂಶುಪಾಲರ ಸಿ. ಟಗರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಎಂಟು ಕ್ಲಬ್ ನ ಅಧ್ಯಕ್ಷ ಕಾರ್ಯದರ್ಶಿಗಳು ತಮ್ಮ ತಮ್ಮ ಕ್ಲಬ್ ನ ಧ್ಯೇಯ ವಾಕ್ಯ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲರು ಉಪಪ್ರಾಂಶುಪಾಲರು ವಿದ್ಯಾರ್ಥಿ ಶಿಕ್ಷಕರೊಡಗೂಡಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ವನಮಹೋತ್ಸವದ ಅಂಗವಾಗಿ ಶಾಲೆ 8 ಕ್ಲಬ್ಗಳ ವತಿಯಿಂದ 5 ನಿಮಿಷದ ಕಾರ್ಯಕ್ರಮವನ್ನು ವೇದಿಕೆಯಲ್ಲಿ ಅತ್ಯಂತ ವಿಶಿಷ್ಟವಾಗಿ ಪ್ರದರ್ಶಿಸಲಾಯಿತು. ಪ್ರಾಂಶುಪಾಲರು ತಮ್ಮ ಅಧ್ಯಕ್ಷ ನುಡಿಯಲ್ಲಿ ಪರಿಸರದ ಮಹತ್ವ ಎತ್ತಿ ಹಿಡಿಯುತ್ತಾ ವಿವಿಧ ಕ್ಲಬ್ ಗಳ ಮೂಲಕ ಪರಿಸರದ ಜಾಗೃತಿ ಸಂದೇಶವನ್ನು ನೀಡಿದ ವಿದ್ಯಾರ್ಥಿಗಳಿಗೆ ಮನಃಪೂರ್ವಕವಾಗಿ ಶ್ಲಾಘಿಸಿದರು.
ತದನಂತರ ಪ್ರೌಢಶಾಲೆಯ 8 9 10ನೇ ತರಗತಿ ವಿದ್ಯಾರ್ಥಿಗಳು ಶಾಲೆಯಿಂದ ಪರಿಸರದ ಘೋಷಣೆಗಳನ್ನು ಕೂಗುತ್ತಾ ಸಾಗರ ರಸ್ತೆಯಿಂದ ಸರ್ಕಲ್ ಕಡೆಗೆ ಸಾಗುತ್ತಾ ರಾಷ್ಟ್ರ ಹೆದ್ದಾರಿ ಮೂಲಕ ಮುಂದೆ ಸಾಗಿ ಮಿನಿ ವಿಧಾನಸೌಧದ ರಸ್ತೆಯಿಂದ ಸರ್ಕಾರಿ ಆಸ್ಪತ್ರೆಯ ರಸ್ತೆ ಎಡೆಗೆ ಸಾಗಿ ಅತ್ಯಂತ ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಮನ ಮಹೋತ್ಸವದ ಮಹತ್ವವನ್ನು , ಮತ್ತು ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಎಲ್ಲೆಡೆ ಪಸರಿಸುತ್ತಾ ಶಾಲೆಗೆ ಹಿಂದಿರುಗಿದರು.
ತದನಂತರ ಶಾಲೆಯ ಮುಂಭಾಗದ ಆವರಣದಲ್ಲಿ ಪಿಯುಸಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜೊತೆಗೂಡಿ ಪ್ರಾಂಶುಪಾಲರು ಹಾಗೂ ಶಿಕ್ಷಕರು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ವನಮಹೋತ್ಸವದ ಸವಿನೆನಪಿಗೆ ಎಲ್ಲಾ ಶಿಕ್ಷಕರಿಗೆ ಒಂದೊಂದು ಗಿಡ ನೀಡುವ ಮೂಲಕ ದಿನದ ಮಹತ್ವವನ್ನು ಎತ್ತಿ ಹಿಡಿಯಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ವಿದ್ಯಾರ್ಥಿಗಳ ಶಿಕ್ಷಕರಿಗೆ ವಿತರಿಸಿ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು.
