ಭಟ್ಕಳ: ಜು 14 ರಿಂದ 19 ರವರೆಗೆ ಆಫ್ರಿಕಾದ ಅಕ್ರಾದಲ್ಲಿ ನಡೆಯಲಿರುವ ವಿಶ್ವ ಜಲವಿದ್ಯುತ್ ಸಮ್ಮೇಳನದಲ್ಲಿ ಪ್ರತಿನಿಧಿಸುವ ಭಾರತ ತಂಡದಲ್ಲಿ ಕನ್ನಡಿಗ ಐ.ಎಫ.ಎಸ್ ಅಧಿಕಾರಿ ಡಾ.ಎ.ಟಿ ದಾಮೋದರ ನಾಯ್ಕ ಪ್ರತಿನಿಧಿಸಲಿದ್ದಾರೆ. ಅಂತರಾಷ್ಟ್ರೀಯ ಬೃಹತ್ ಆಣೆಕಟ್ಟುಗಳ ಜಲವಿದ್ಯುತ್ ಸಮಿತಿಯ ಭಾರತದ ಶಾಶ್ವತ ಪ್ರತಿನಿಧಿ ಸದಸ್ಯರಾಗಿರುವ ಡಾ. ಎ.ಟಿ.ದಾಮೋದರ ನಾಯ್ಕ ಪ್ರಸ್ತುತ ಅರುಣಾಚಲ ಪ್ರದೇಶ ರಾಜ್ಯ ಸರ್ಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಿ.ಇ.ಒ ಆಗಿ ಕೆಲಸ ಮಾಡುತ್ತಿದ್ದಾರೆ. ಈ ತಂಡವು ವಿಶ್ವ ಸಮ್ಮೇಳನದಲ್ಲಿ ಭಾರತದ ಬೃಹತ್ ಆಣೆಕಟ್ಟು ಜಲವಿದ್ಯುತ್ ಸ್ಥಾವರಗಳ ಆಧುನಿಕ ತಂತ್ರಜ್ಞಾನದ ಯಶೋಗಾಥೆಯನು ವಿಶ್ವಮಟ್ಟದಲ್ಲಿ ಇತರೆ ಸದಸ್ಯ ರಾಷ್ಟ್ರಗಳ ಜತೆ ಹಂಚಿಕೊಳ್ಳಲಿದೆ. ಸಮ್ಮೇಳನದ ಜೊತೆಯಲ್ಲಿ ಭಾರತೀಯ ಪ್ರತಿನಿಧಿಗ ತಂಡವು ದಕ್ಷಿಣ ಆಪ್ರೀಕಾ, ಕೀನ್ಯ, ತಾಂಝೇನಿಯಾ ಹಾಗೂ ಇತಿಯೋಪಿಯ ದೇಶಗಳ ಬೃಹತ್ ಆಣೆಕಟ್ಟುಗಳ ಜಲವಿದ್ಯುತ್ ಸ್ಥಾವರಗಳ ವೀಕ್ಷಣೆ ಸಹ ನಡೆಸಲಿದೆ
ಆಫ್ರಿಕಾದ ವಿಶ್ವ ಜಲವಿದ್ಯುತ್ ಸಮ್ಮೇಳನದಲ್ಲಿ ಪ್ರತಿನಿಧಿಸುವ ಭಾರತ ತಂಡದಲ್ಲಿ ಕನ್ನಡಿಗ ಐ.ಎಫ.ಎಸ್ ಅಧಿಕಾರಿ ಡಾ. ಎ.ಟಿ ದಾಮೋದರ ನಾಯ್ಕ
RELATED ARTICLES
