ಭಟ್ಕಳ: ಜೋಕಾಲಿಯಲ್ಲಿ ಆಟ ಆಡುತ್ತಿರುವಾಗ ಜೋಕಾಲಿಯ ಹಗ್ಗ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ತೆರ್ನಮಕ್ಕಿ ಸಭಾತಿಯಲ್ಲಿ ಜು.17 ರಂದು ಗುರುವಾರ ನಡೆದಿದೆ.
ಪ್ರಣೀತ ಜಗನ್ನಾಥ ನಾಯ್ಕ (13) ಮೃತ ಬಾಲಕಿ.
ಈಕೆ 7ನೇ ತರಗತಿಯಲ್ಲಿ ಓದುತ್ತಿದ್ದಳು.
ಮಳೆಯ ಪ್ರಯುಕ್ತ ಗುರುವಾರ ಶಾಲೆಗೆ ರಜೆಯಿದ್ದ ಕಾರಣ ಬಾಲಕಿ ತನ್ನ ಸಹೋದರಿಯೊಂದಿಗೆ ವೇಲ್ (ಶಾಲು) ನಿಂದ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದಳು. ಈ ವೇಳೆ ಅಕಸ್ಮಾತಾಗಿ ಜೋಕಾಲಿಯ ಹಗ್ಗ ಕುತ್ತಿಗೆಗೆ ಸುತ್ತಿಕೊಂಡಿದೆ. ಇದರಿಂದಾಗಿ ಬಾಲಕಿಗೆ ಉಸಿರುಗಟ್ಟಿದ್ದು, ಅದರಿಂದ ತಪ್ಪಿಸಿಕೊಳ್ಳಲಾಗದೇ ಪ್ರಾಣ ಬಿಟ್ಟಿದ್ದಾಳೆ.
ಘಟನೆ ಸಂದರ್ಭದಲ್ಲಿ ತಾಯಿಯು ಕೂಡಾ ಕೆಲಸಕ್ಕೆ ಹೋಗಿದ್ದರಿಂದ ಅಪಾಯದಿಂದ ತಪ್ಪಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ 7 ನೇ ತರಗತಿ ಬಾಲಕಿ ದಾರುಣ ಸಾವು
RELATED ARTICLES
