Tuesday, January 27, 2026
Homeಟೈಮ್ಸ್ ಆಫ್ ಕೆನರಾ ವರದಿಭಟ್ಕಳದ ಗುರುಕೃಪಾ ಸಹಕಾರಿ ಪತ್ತಿನ ಸಂಘದ 27 ನೇ ವರ್ಷದ ಷೇರುದಾರರ ವಾರ್ಷಿಕ ಸಭೆ.

ಭಟ್ಕಳದ ಗುರುಕೃಪಾ ಸಹಕಾರಿ ಪತ್ತಿನ ಸಂಘದ 27 ನೇ ವರ್ಷದ ಷೇರುದಾರರ ವಾರ್ಷಿಕ ಸಭೆ.

ಭಟ್ಕಳ : ಭಟ್ಕಳದ ಗುರುಕೃಪಾ ಸಹಕಾರಿ ಪತ್ತಿನ ಸಂಘ 2024-25ನೇ ಸಾಲಿನಲ್ಲಿ 60 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘ ಆರ್ಥಿಕವಾಗಿ ಸದೃಢವಾಗಿದೆ ಎಂದು ಅಧ್ಯಕ್ಷರಾದ ಮೋಹನ ನಾಯ್ಕ ಹೇಳಿದರು.

       ಅವರು ಶನಿವಾರ ಪಟ್ಟದ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಂಘದ 27ನೇ ವರ್ಷದ ವಾರ್ಷೀಕ ಶೇರುದಾರರ ಸಭೆಯನ್ನುದ್ದೇಶಿಸಿ ಮಾತನಾಡಿದರು. 2024-25ನೇ ಸಾಲಿನ ಅಂತ್ಯಕ್ಕೆ ಸಂಘದ ಶೇರು 2.66 ಕೋಟಿ ಇದ್ದು, 5.91 ಕೋಟಿ ಸ್ವಂತ ಬಂಡವಾಳ ಹೊಂದಿದೆ ಎಂದರು. ಕಳೆದ ಸಾಲಿನಲ್ಲಿ ಸಂಘವು 45.53 ಕೋಟಿ ಠೇವಣಿ ಸಂಗ್ರಹಿಸಿ 47.98 ಕೋಟಿ ಸಾಲ ನೀಡಲಾಗಿದೆ ಎಂದರು. ಸಂಘವ ದುಡಿಯುವ ಬಂಡವಾಳ 60 ಕೋಟಿ ಹೊಂದಿದ್ದು,ಕಾರ್ಯನಿರ್ವಹಿಸುತ್ತೀರುವ 6 ಶಾಖೆಗಳು ಲಾಭದಲ್ಲಿದೆ ಎಂದರು. ವರ್ಷದಿಂದ ವರ್ಷಕ್ಕೆ ಸಂಘದ ಏರುಗತಿಯ ಬೆಳವಣಿಗೆಗೆ ಸದಸ್ಯರ ಸಹಕಾರ ಕಾರಣ ಎಂದರು. ಕಳೆದ ಸಾಲಿನಲ್ಲಿ ಸಂಘದ ಪ್ರಧಾನ ಕಚೇರಿಗೆ ಅಗತ್ಯ ಇರುವ ಸ್ವಂತ ಕಟ್ಟಡವನ್ನು ಖರೀದಿ ಮಾಡಲಾಗಿದೆ. ಈ ಸಾಲಿನಲ್ಲಿ ಸಂಘಕ್ಕೆ ಅಗತ್ಯ ಇರುವ ನಾಲ್ಕು ಚಕ್ರದ ವಾಹನವನ್ನು ಖರೀದಿ ಮಾಡಲಾಗುವುದು ಎಂದರು. ಲಾಭಾಂಶದಲ್ಲಿ ಶೇರುದಾರರಿಗೆ ಶೇಕಡಾ 6 ಡಿವಿಡೆಂಟ್ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಸದಸ್ಯರು  ಸಂಘದ ವ್ಯವಹಾರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

      ಸಂಘದ ಉಪಾಧ್ಯಕ್ಷ ಕುಮಾರ ನಾಯ್ಕ, ನಿರ್ದೇಶಕರಾದ ಸುರೇಶ ನಾಯ್ಕ,ವೆಂಕಟೇಶ ನಾಯ್ಕ, ರಾಜೇಶ ನಾಯ್ಕ, ಶಬರೀಶ ನಾಯ್ಕ, ಹರೀಶ ನಾಯ್ಕ, ಸತೀಶ ನಾಯ್ಕ, ಸುರೇಶ ಮೊಗೇರ, ಜಯಂತ ಗೊಂಡ, ವಿಜಯಾ ನಾಯ್ಕ, ಭಾರತಿ ನಾಯ್ಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಾಸು ನಾಯ್ಕ ಇದ್ದರು.

ಭಾಸ್ಕರ ನಾಯ್ಕ
ಭಾಸ್ಕರ ನಾಯ್ಕ
ಅನುಭವಿ ಪತ್ರಕರ್ತರು, 21 ವರ್ಷಗಳ ಅನುಭವ, ಭಟ್ಕಳ ಡೈರಿ, ಕೆನರಾ ವಿಜಯ, ಸಪ್ತಮುಖಿ, ವಿಜಯವಾಣಿ,ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಹಾಗೂ ವಿಸ್ತಾರ ನ್ಯೂಸ್ ಕನ್ನಡ ವಾಹಿನಿಯಲ್ಲಿ ವರದಿಗಾರಿಕೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments