Tuesday, January 27, 2026
Homeಅಪರಾಧಅಕ್ರಮ ದನದ ಮಾಂಸ ಸಾಗಾಟದ ವೇಳೆ ಪೊಲೀಸ್ ದಾಳಿ: ಆರೋಪಿಗಳು ಪರಾರಿ

ಅಕ್ರಮ ದನದ ಮಾಂಸ ಸಾಗಾಟದ ವೇಳೆ ಪೊಲೀಸ್ ದಾಳಿ: ಆರೋಪಿಗಳು ಪರಾರಿ

ವಶಪಡಿಸಿಕೊಂಡ ದನದ ಮಾಂಸ

ಭಟ್ಕಳ: ಅಕ್ರಮವಾಗಿ ಸ್ಕೂಟರಲ್ಲಿ ದನದ ಸಾಗಾಟ ಮಾಡುತ್ತಿದ್ದ ವೇಳೆ ಹಾಗೂ ವಾಸದ ಮನೆಯ ಮುಖ್ಯ ದ್ವಾರದ ಎದುರುಗಡೆಯ ವರಾಂಡದಲ್ಲಿ ದನದ ಮಾಂಸ ಕಟಾವು ಮಾಡುತ್ತಿರುವ ಸಮಯದಲ್ಲಿ ಪೊಲೀಸರು ದಾಳಿ ಮಾಡಿ  ಆರೋಪಿಗಳನ್ನು ಪೊಲೀಸರನ್ನು ನೋಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಓರ್ವ ಆರೋಪಿಯನ್ನು ಇಸ್ಮಾಯಿಲ್ ಹವ್ಯಾ ಇಸ್ಮಾಯಿಲ್ ಮೊಹಮ್ಮದ ಹುಸೇನ್ ಮೂಸಾನಗರ ನಿವಾಸಿ ಹಾಗೂ ಇನ್ನಿಬ್ಬರು ಆರೋಪಿತರ ಹೆಸರು ವಿಳಾಸ ತಿಳಿದು ಬಂದಿಲ್ಲವಾಗಿದೆ.

ಇವರು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ದನಗಳನ್ನು ಕಳುವು ಮಾಡಿಕೊಂಡು ಬಂದು ಅವುಗಳನ್ನು ಕಟಾವು ಮಾಡಿ ಸುಮಾರು 25 ಕೆ ಜಿ ತೂಕದ 7500 ರೂ ಬೆಲೆಯ ದನದ ಮಾಂಸವನ್ನು ಮೊದಲ ಆರೋಪಿ ಸ್ಕೂಟರ ನಂಬರ ಕೆಎ-47 ಕ್ಯೂ 4473 ನಲ್ಲಿ ಹಾಕಿಕೊಂಡು ಬದ್ರಿಯಾ ಕಾಲೋನಿಯ ಕಡೆಯಿಂದ ಮೂಸಾನಗರ 4 ನೇ ಕ್ರಾಸ್ ಮುಖಾಂತರ ಹಾಕಿಕೊಂಡು ಸಾಗಾಟ ಮಾಡಿಕೊಂಡು ಹೋಗುವಾಗ ಹಾಗೂ ಇನ್ನಿಬ್ಬರು ಆರೋಪಿತರೂ 35 ಕೆ ಜಿ ತೂಕದ 10,500  ರೂ ಬೆಲೆಯ ದನದ ಮಾಂಸವನ್ನು 1 ನೇ ಆರೋಪಿತನ ವಾಸದ ಮನೆಯ ಮುಖ್ಯ ದ್ವಾರದ ಎದುರುಗಡೆ ವರಾಂಡದಲ್ಲಿ ಕಟಾವು ಮಾಡುತ್ತಿರುವ ಸಮಯದಲ್ಲಮೂಸಾನಗರ 4 ನೇ ಕ್ರಾಸ್ ಆರೋಪಿತನ 1 ನೇ ಮನೆಯ ಹತ್ತಿರ ಪಿ.ಎಸ್.ಐ  ತಿಮ್ಮಪ್ಪ ಎಸ್. ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಆರೋಪಿತರು ಓಡಿ ಹೋಗಿದ್ದಾರೆ.

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾಸ್ಕರ ನಾಯ್ಕ
ಭಾಸ್ಕರ ನಾಯ್ಕ
ಅನುಭವಿ ಪತ್ರಕರ್ತರು, 21 ವರ್ಷಗಳ ಅನುಭವ, ಭಟ್ಕಳ ಡೈರಿ, ಕೆನರಾ ವಿಜಯ, ಸಪ್ತಮುಖಿ, ವಿಜಯವಾಣಿ,ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಹಾಗೂ ವಿಸ್ತಾರ ನ್ಯೂಸ್ ಕನ್ನಡ ವಾಹಿನಿಯಲ್ಲಿ ವರದಿಗಾರಿಕೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments