ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭಟ್ಕಳದ 2024 25 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಮತ್ತು ಸಮಾರೋಪ ಸಮಾರಂಭ ದಿನಾಂಕ 16/06/2025 ರಂದು ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಶ್ರೀ ವೆಂಕಟೇಶ್ವರ ನಾಮಧಾರಿ ವಿದ್ಯಾ ವರ್ಧಕ ಸಭಾಭವನ ಜಾಲಿಯಲ್ಲಿ ನಡೆಯಲಿದ್ದು ಕಾರ್ಯಕ್ರಮವನ್ನು ಸನ್ಮಾನ್ಯ ಸಚಿವರಾದ ಶ್ರೀಮಂಕಾಳ್ ಎಸ್ ವೈದ್ಯ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗೋಪಾಲಕೃಷ್ಣ ಹೆಗಡೆ ಪ್ರಾಚಾರ್ಯರು ಜನತಾ ವಿದ್ಯಾಲಯ ಶಿರಾಲಿ ಹಾಗೂ ಶ್ರೀ ಮಾದೇವ ನಾಯ್ಕ ಅಧ್ಯಕ್ಷರು ನಾಮಧಾರಿ ಸಭಾಭವನ ಜಾಲಿ ಇವರು ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
