Tuesday, January 27, 2026
Homeeducationಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಮತ್ತು ಸಮಾರೋಪ ಸಮಾರಂಭ ಸಂಪನ್ನ.!

ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಮತ್ತು ಸಮಾರೋಪ ಸಮಾರಂಭ ಸಂಪನ್ನ.!

ಭಟ್ಕಳ (Bhatkal): ಬದುಕು ಕಟ್ಟುವ  ಮೌಲ್ಯಗಳುಳ್ಳ ಶಿಕ್ಷಣದ ಅವಶ್ಯಕತೆ ಇದೆ. ಅದು ಗುರುಗಳಿಂದ ವಿದ್ಯಾರ್ಥಿಗಳು ಸಂಪಾದಿಸುವ ಅಗತ್ಯವಿದೆಯೆಂದು  ಜನತಾ ವಿದ್ಯಾಲಯ ಶಿರಾಲಿಯ ಪ್ರಾಂಶುಪಾಲರಾದ ಗೋಪಾಲಕೃಷ್ಣ ಶಂಕರ್ ಹೆಗಡೆ ಹೇಳಿದರು. ಅವರು ಭಟ್ಕಳ್ ತಾಲೂಕಿನ ಜಾಲಿ ಶ್ರೀ ವೆಂಕಟೇಶ್ವರ ನಾಮಧಾರಿ ವಿದ್ಯಾ ವರ್ಧಕ ಸಭಾಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭಟ್ಕಳ್ ಹಮ್ಮಿಕೊಂಡಿದ್ದ 2024- 25 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಡಿಸಿ ಸದಸ್ಯರಾದ ರಮೇಶ ಗೊಂಡ, ಸೋಮಯ್ಯಗೊಂಡ, ಮಂಜಪ್ಪ ನಾಯ್ಕ, ರಮೇಶ್ ನಾಯ್ಕ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ನಾಗೇಶ್ ಶೆಟ್ಟಿ ಇವರು ಕಾಲೇಜಿನ ಸೌಲಭ್ಯಗಳು ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು ಹಾಗೂ ಸಚಿವರಾದ ಮಂಕಾಳ ವೈದ್ಯರು ಕಾಲೇಜಿನ ಕಟ್ಟಡಕ್ಕೆ ಒಂದುವರೆ ಕೋಟಿ ಅನುದಾನವನ್ನು ತಂದಿದ್ದು ಅವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಅತ್ಯುತ್ತಮ ಕಾಲೇಜನ್ನಾಗಿ ರೂಪಿಸಬಹುದೆಂದು ಹೇಳಿದರು. ಕಾರ್ಯಕ್ರಮದ ಸ್ವಾಗತವನ್ನು  ಅಣ್ಣಪ್ಪ ನಾಯ್ಕ ಇವರು ಮಾಡಿದರು.
ಕಾರ್ಯಕ್ರಮದ ಮುನ್ನೋಟವನ್ನು  ಸುರೇಶ್ ಮೆಟಗಾರ ಹೇಳಿದರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು ಕಾರ್ಯಕ್ರಮದ ವಂದನಾರ್ಪಣೆಯನ್ನು ರೋಹಿತ್ ನಾಯ್ಕ್  ಮಾಡಿದರು ಕುಮಾರಿ ರೂಪಾ ನಾಯ್ಕ್ ಸ್ವಾಗತ ಗೀತೆ ಹಾಡಿದರು
ಕುಮಾರಿ ವಿಜೇತ  ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು

ಭಾಸ್ಕರ ನಾಯ್ಕ
ಭಾಸ್ಕರ ನಾಯ್ಕ
ಅನುಭವಿ ಪತ್ರಕರ್ತರು, 21 ವರ್ಷಗಳ ಅನುಭವ, ಭಟ್ಕಳ ಡೈರಿ, ಕೆನರಾ ವಿಜಯ, ಸಪ್ತಮುಖಿ, ವಿಜಯವಾಣಿ,ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಹಾಗೂ ವಿಸ್ತಾರ ನ್ಯೂಸ್ ಕನ್ನಡ ವಾಹಿನಿಯಲ್ಲಿ ವರದಿಗಾರಿಕೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments